ಗುರುವಾರ, ಏಪ್ರಿಲ್ 19, 2012

ಮನೆ ಮನೆ ಕವಿಗೋಷ್ಠೀಯ ಪ್ರಕಟಣೆ


ಕವಿಗೋಷ್ಠೀ - 187

                   ಮನೆ ಮನೆ ಕವಿಗೋಷ್ಟೀ ಯ 187 ನೇ ಕಾರ್ಯಕ್ರಮವು ದಿನಾಂಕ- 06/05/2012 ನೇ ಭಾನುವಾರದಂದು ಭಾರತೀಯ ವಿದ್ಯಾಮಂದಿರದಲ್ಲಿ ನಡೆಯಲಿದೆ, ತಮ್ಮ ಹೊಸ ಕವನವನ್ನು  ವಾಚಿಸಬಯಸುವ ಕವಿಗಳು ದಯವಿಟ್ಟು ತಪ್ಪದೆ ಭಾಗವಹಿಸಿ, ಭಾಗವಹಿಸಲಿಚ್ಛಿಸುವ ಕವಿಗಳು ತಮ್ಮ ಸ್ವರಚಿತ ಅಪ್ರಕಟಿತ ಕವನದ ಒಂದು ಪ್ರತಿಯನ್ನು ಸಂಚಾರಕರಿಗೆ ತಪ್ಪದೆ ನೀಡತಕ್ಕದ್ದು.
080-025308815, 9480695022, 9480695031. 
 ಸಂಚಾಲಕರು 

ಮನೆ ಮನೆ ಕವಿಗೋಷ್ಠೀಯ ಪ್ರಕಟಣೆ

ಭಾನುವಾರ, ಏಪ್ರಿಲ್ 1, 2012

ಮನೆಮನೆ ಕವಿಗೋಷ್ಢೀ, ಹಾಸನ, ಒಂದು ಪರಿಚಯ

ಮನೆ ಮನೆ ಕವಿಗೋಷ್ಠೀ

ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿರುವ ಕಾರ್ಯಕ್ರಮದಲ್ಲಿ "ಮನೆ ಮನೆ ಕವಿಗೋಷ್ಠಿ" ಒಂದಾಗಿದೆ.  1996 ನವೆಂಬರ್ 3 {ತಿಂಗಳ ಮೊದಲನೆಯ ಭಾನುವಾರ} ಸಂಜೆ 4 ಗಂಟೆಗೆ, ಅಂದಿನ ಹಾಸನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹರಾಗಿದ್ದ ಡಾ// ವಸಂತ ಕುಮಾರ್ ಪೆರ್ಲರವರ ಮನೆಯಲ್ಲಿ ಒಂದು ಸಾಹಿತಿಗಳ ಗೋಷ್ಠಿ ನಡೇಯಿತು ಅದೇ ಈ "ಮನೆ ಮನೆ ಕವಿಗೋಷ್ಠಿ"ಯನ್ನು ಸ್ವತಃ ಸಂಚಾಲಕರಾಗಿ ಪ್ರಾರಂಭಿಸಿ ಮುಂದಿನ ಹಲವಾರು ತಿಂಗಳುಗಳ ಕಾಲ ನಡೆಸಿದರು.  ಈ ಒಂದು ಕವಿಗೋಷ್ಠಿ ಕಾಲ ಕ್ರಮೇಣ ಸಾಹಿತ್ಯಾಸಕ್ತರ ಮನವನ್ನು ಗೆದ್ದಿತು.  ಸುಗಮ ಸಂಗೀತ ಗಾಯನ, ಹಳೆಯ ಮತ್ತು ಹೊಸ ಕಾವ್ಯಗಳ ಬಗ್ಗೆ ನಾಡಿನ ಖ್ಯಾತ ಪರಿಣತರುಗಳೊಂದಿಗೆ ಉಪನ್ಯಾಸದ ಜೋತೆಗೆ ಹೊಸ ಪುಸ್ತಕಗಳ ಪರಿಚಯ ಮಾಡುವರು.

     ವಸಂತ ಕುಮಾರ್ ಪೆರ್ಲರವರ ನಂತರ ಸಂಚಾಲಕರಾಗಿ ಎಚ್.ಆರ್.ಚಂದ್ರಶೇಖರ್, ಮಳಲಿ ಹರೀಶ್ ಕುಮಾರ್, ಶ್ರೀಮತಿ ಸಕೀನಾ ಬೇಗಂ, ನಿರ್ಮಲಾ.ವಿ.ದೇವ್, ಶ್ರೀ ಕೊಟ್ರೇಶ್ ಉಪ್ಪಾರ್ ರವರು ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಶೀಟೀ ರವರು ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

     "ಮನೆ ಮನೆ ಕವಿಗೋಷ್ಟಿ"ಯಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರವಿಲ್ಲವಾದರೂ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಾಯೋಜಕತ್ವ ರೂಪದಲ್ಲಿ ನಡೆಯುತ್ತದೆ.  ಹಾಸನದ ಸಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದಂತಹ ಹೆಸರು ಮಾಡಿರುವ  "ಮನೆ ಮನೆ ಕವಿಗೋಷ್ಟಿ" ಕೇವಲ ಪ್ರತಿಭಾಪಕ್ಷಪಾತಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಹೊರತು ಯಾವುದೇ ರೀತಿಯ ಜಾತಿ ಹಣೆಪಟ್ಟಿ ಇದಕಿಲ್ಲವಾಗಿದೆ.

     ಈ ಒಂದು ಕವಿಗೋಷ್ಠಿಯಲ್ಲಿ ಯುವಕರಿಂದ ವಯೋವೃದ್ಧರ ವರೆಗೂ ಎಲ್ಲರೂ ಇದರಲ್ಲಿ ಭಾಗವಹಿಸಿ ಕವಿತೆಗಳನ್ನು ವಾಚಿಸಿ ನಂತರ ಆ ಕವಿತೆಯ ಬಗ್ಗೆ ವಿಮರ್ಶೆ ಮಾಡುತ್ತಾ ಕವಿಯ ಮನಸ್ಸಿಗೆ ಬೇಸರ ವಾಗದಂತೆ ಕವಿತೆಯಲ್ಲಿರ ಬೇಕಾದಂತಹ ಅಂಶವನ್ನು ತಿಳಿಸಿ ಕವಿಗೆ ಉತ್ಸಾಹವನ್ನು ನೀಡುತ್ತಾ ಬಂದಿಂದೆ.

     ಹಾಸನದಲ್ಲಿ ಈ "ಮನೆ ಮನೆ ಕವಿಗೋಷ್ಟಿ"ಯಿಂದ ಸ್ಫೂರ್ತಿಗೊಡು "ಮನೆ ಮನೆ ಗಮಕಗೋಷ್ಠಿ" "ಮನೆ ಮನೆ ಸ್ವಸ್ಧ್ಯ" "ಚುಟುಕುಗೋಷ್ಠಿ" ಇತ್ತಿಚಿಗೆ "ಮನೆ ಮನೆ ಆರೋಗ್ಯ"ಎಂಬ ಕಾರ್ಯಕ್ರಮಗಳು ಆರಂಭವಾಗಿದೆ.
                                                                           ಡಿ.ಜೆ.ಮಂಜುನಾಥ್
                                                          www.hassan-history.blogspot.in  ನಲ್ಲಿ