ಶನಿವಾರ, ಡಿಸೆಂಬರ್ 22, 2012

ಮನೆಯಿಂದ ಮನೆಗೆ

 ಮನೆಯಿಂದ ಮನೆಗೆ

(ಹಾಸನದ ಮನೆಮನೆ ಕವಿಗೋಷ್ಟಿಯಲ್ಲಿ ಪ್ರಸ್ತುತಗೊಂಡ ಕೆಲವು ಕವನಗಳ ಸಂಗ್ರಹ)

ವನದೇವಿಯ ಅಳಲು
ಓ ಮಾನವನೇ, ಓ ಮಾನವನೇ
ನಾ ನಿನ್ನಯ ಬಾಳಿನ ಬೆಳಕಾದೆ
ನನ್ನುಪಕಾರವ ಮರೆತಿಹ ನೀನು
ನನ್ನಯ ಬಾಳಿಗೆ ಮುಳುವಾದೆ || ಓ...||
                 ಕಲುಷಿತ ಪರಿಸರ ದೋಷದ ಮಣಿಸಿ
                 ಸುಲಲಿತಗೊಳಿಸುವೆ ನಾನು
                 ದೂಷಿತ ಮನಸಿನ ವಿಷವನು ಉಣಿಸಿ
                 ದುರುಳತೆ ತೋರುವೆ ನೀನು || ಓ... |
ಮಾನವನಾಗಲಿ ಕಾನನವಾಗಲಿ
ಸೃಷ್ಟಿಯ ದೃಷ್ಟಿಗೆ ಒಂದೇ
ಮಾನವೀಯತೆಯ ಧರ್ಮದ ಮರೆತು
ದಾನದ ನೀನಾಗಿ ಮೆರೆದೆ || ಓ.... ||
                 ವನ್ಯ ಮೃಗಗಳು ವೃಕ್ಷರಾಜಿಗಳು
                 ಎನ್ನಯ ಗರ್ಭದ ಶಿಸುಗಳು
                 ಧನ ದಾಹದ ಹುಸಿ ಆಮಿಷಕಾಗಿ
                 ಆದವು ಬಲಿಯಾ ಪಶುಗಳು || ಓ... ||
ಏಳು ಏಳು, ಎಚ್ಚೆತ್ತುಕೊಳ್ಳು
ಕೆಲಕ್ಷಣಗಳ ಸಮಯವು ಲಭಿಸಿಹುದು
ಕೀಳು ಭಾವನೆಯ ಮನದಿಂ ತೊಡೆಯಲು
ತಂಪುಗಾಳಿಯು ಬೀಸಿಹುದು || ಓ ... ||
  ಲೇಖಕಿ- ಅರಿಯದಾ ಬಾಲೆ 

ಜ್ಯೋತಿ
 ಜ್ಯೋತಿ ಬೆಳಗುತಿಹುದು
ಕನ್ನಡದಾ ಕಂದನೆ
ಜಾತಿ ಭೇದ ಮರೆತು ನಡೆ
ನಂಬಿ ಸೃಷ್ಡಿಯೊಂದನೆ
           ನಾನು ನೀನು ಯಾರೋ ಏನೋ
           ಯಾತಕಾಗಿ ಬಂದೆವೋ
           ತಾನು ತನದು ಸ್ವಾರ್ಥವೇಕೋ
          ಯಾರಿಗಾಗಿ ಬಂದವೋ
          ಸಾನುರಾಗದಿಂದ ಇರಲು
          ಬಾನು-ಭುವಿಯ ಚಂದವೋ
          ಮಾನ ನೀಡಿ ಮಾನ್ಯನಾಗು
          ಶೂನ್ಯ ನೀನು ಆಗೆಯೆಂದು
          ಅನ್ಯ ಭಾವ ತೊಲಗಲಿ
          ಅನನ್ಯ ಸೇವೆ ಜನತೆಗಾಗಿ
          ಮುಡಿಪು ಬಾಳಿಗಾಗಿ
                       ಲೇಖಕಿ - ಅರಿಯದ ಬಾಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ